Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಮನಸಿನ ಮಾತು

ಪ್ರಿಯ ಓದುಗರೇ,

'ಓ ಮನಸೇ....' ಪತ್ರಿಕೆ ಮತ್ತೆ ಆರಂಭವಾಗುತ್ತಿದೆ ಎಂಬ ನಾಲ್ಕು ಸಾಲುಗಳ ಪ್ರಕಟಣೆಗೆ ನಿಮ್ಮಿಂದ ದೊರಕಿದ ಸ್ವಾಗತ ಅಭೂತಪೂರ್ವ. ಯಾವಾಗ ಶುರು ಆಗುತ್ತಿದೆ ಅನ್ನುವ ಕುತೂಹಲದಿಂದ ಹಿಡಿದು ಬೇಗನೆ ಶುರು ಮಾಡ್ರೀ ಅನ್ನುವ ಅಪ್ಪಣೆ ತನಕ ನಾನಾ ರೀತಿಯ ಪ್ರತಿಕ್ರಿಯೆಗಳು ಬಂದಿವೆ. ಬರೀ ಆಸೆ ಹುಟ್ಟಿಸ್ತಿದೀರೋ ಅಥವಾ ನಿಜವಾಗ್ಲೂ ಶುರು ಮಾಡ್ತಿದೀರೋ ಎಂದು ಕಿಚಾಯಿಸಿದವರೂ ಇದ್ದಾರೆ. ನಿಮ್ಮನ್ನು ಖಂಡಿತಾ ನಿರಾಸೆಗೊಳಿಸುವುದಿಲ್ಲ. ನಿಮ್ಮಾಣೆಗೂ 'ಓ ಮನಸೇ....' ಮುಂದಿನ ತಿಂಗಳಲ್ಲಿ ನಿಮ್ಮ ಮನೆಬಾಗಿಲಲ್ಲಿರುತ್ತದೆ. ಅಂದಹಾಗೆ 'ಓ ಮನಸೇ..'ಯ ಪುನರಾಗಮನವನ್ನು ನಾವು ವಿಶೇಷ ರೀತಿಯಲ್ಲಿ ಆಚರಿಸುವುದಕ್ಕೆ ನಿರ್ಧರಿಸಿದ್ದೇವೆ.

'ಸಮಾಧಾನ'ದಂತಹ ಜನಪ್ರಿಯ ಅಂಕಣಗಳ ಜೊತೆಗೆ ಕೆಲವು ಹೊಸ ಅಂಕಣಗಳು ಸೇರ್ಪಡೆಯಾಗುತ್ತಿವೆ. ನಮ್ಮ ನಿತ್ಯದ ಬದುಕಲ್ಲಿ ಪದೇಪದೇ ಬಂದುಹೋಗುವ ಕೆಲವು ವಿಶಿಷ್ಟ ಆಚರಣೆಗಳ ಹಿಂದಿರುವ ಕಾರಣಗಳನ್ನು ಹುಡುಕುವ 'ಆಚಾರ ವಿಚಾರ', ನಿಮ್ಮೂರ ದೇವರ ಹಿನ್ನೆಲೆಯನ್ನು ಪರಿಚಯಿಸುವ 'ಊರ ದೇವರ ಸುತ್ತ ನೂರು ಕತೆ', ನಿಮ್ಮ ಕಾನೂನು eನವನ್ನು ವಿಸ್ತರಿಸುವ 'ಲಾ ಪಾಯಿಂಟ್‌', ಹಳ್ಳಿ ಮನೆಗಳಲ್ಲಿ ಇಂದಿಗೂ ಮಕ್ಕಳ ಮನಸ್ಸಲ್ಲಿ ಮನೆ ಮಾಡಿರುವ ಭೂತ, ಪ್ರೇತ, ಪಿಶಾಚಿಗಳ ಜಗತ್ತನ್ನು ಅನಾವರಣಗೊಳಿಸುವ 'ದೆವ್ವದ ಕತೆ', ಇತ್ಯಾದಿ.. ಇವೆಲ್ಲದರ ಜೊತೆ ರುಚಿಗೆ ತಕ್ಕಷ್ಟು ಕತೆ, ಕವನ, ಜೋಕ್ಸ್ ಇದ್ದೇ ಇರುತ್ತವೆ. ಓದುವ ಸುಖ ನಿಮ್ಮದಾಗಲಿ.

ನಿಮ್ಮ ಲೇಖನಗಳನ್ನು omanase@ravibelagere.com ಗೆ ಕಳಿಸಿ..

ಹೆಚ್ಚಿನ ಅಪ್ ಡೇಟ್ ಗಳಿಗೆ https://www.facebook.com/omanase2013 ಪುಟ ನೋಡುತ್ತಿರಿ

-ಬೆಳಗೆರೆ

Kaamaraja Maarga Book
See for all books
TV Shows
 
Books & Coffee
 
Prathana School Prathana School
Photo Gallery
Photo Gallery

© Ravi Belagere.

My Books